ಸಿಂಗಪುರದ ಕನ್ನಡ ಸಂಘವು ಲಾಭರಹಿತ ಸಂಸ್ಥೆಯಾಗಿದ್ದು, ೧೧ ಸೆಪ್ಟೆಂಬರ್ ೧೯೯೬ ರಂದು ಇಲ್ಲಿಯ ರಿಜಿಸ್ಟ್ರಾರ್ ಆಫ್ ಸೊಸೈಟೀಸ್ ನಲ್ಲಿ ನೊಂದಾಯನೆಯ ಮೂಲಕ ತನ್ನ ಪ್ರಯಾಣವನ್ನು ಆರಂಭಿಸಿತು.
ಸಂಘದ ಮೂಲ ಧ್ಯೇಯವು ಸಿಂಗಪುರ ಹಾಗೂ ವಿಶ್ವದಾದ್ಯಂತ ಇರುವ ಕನ್ನಡಿಗರಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಬೆಳವಣಿಗೆಯನ್ನು ಉತ್ತೇಜಿಸುವುದಾಗಿದೆ.
ಸಿಂಗಪುರದಲ್ಲಿರುವ ಕನ್ನಡ ಸಮುದಾಯವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಅವರ ಬೇರುಗಳು ಮತ್ತು ಪರಂಪರೆಯೊಂದಿಗೆ ಬಲವಾದ ಬಂಧವನ್ನು ಉಳಿಸಿಕೊಳ್ಳಲು ನವೀನ ಮತ್ತು ಸೃಜನಶೀಲ ಮಾರ್ಗಗಳನ್ನು ಹುಡುಕುತ್ತಾ, ಸಂಘವು ನಿರಂತರವಾಗಿ ಶ್ರಮಿಸುತ್ತಿದೆ.
Kannada Sangha (Singapore) is a not for profit organization established on 11 September 1996 under Registry of Societies, Singapore. Its mission is to promote the Kannada language, culture, and heritage among the Kannadiga community in Singapore and beyond.
Celebrate Kannada culture, connect with community, and be part of our journey.

Cultural Events
Hosting festivals, music, and dance performances that celebrate Kannada traditions.

Language Promotion
Offering Kannada language classes and educational programs for children and adults.

Community Engagement
Organizing social gatherings and collaborative events to strengthen community bonds.
ಕೇವಲ ಅಮ್ಮ ಹೇಗೂ ಮಡದಿ ಎಂದಾಗ ಓ ಗೂಡುತ್ತಿದ್ದ ನನಗೆ ಕನ್ನಡತಿ ಎಂದಾಗ ಮತ್ತೆ ಓ ಗೂಡುವಂತೆ ಮಾಡಿದ ಕನ್ನಡ ಸಂಘ ಸಿಂಗಾಪುರಕ್ಕೆ ನನ್ನ ಅನಂತ ಅನಂತ ಧಾನ್ಯವಾದಗಳು . ಹಿಂದೆ ಶಾಲಾ ದಿನಗಳಲ್ಲಿ ಇದ್ದ ಹುಮ್ಮಸ್ಸು ಹೇಗೂ ವೇದಿಕೆಯನ್ನು ಮತ್ತೆ ನನಗೆ ಕಲ್ಪಿಸಿಕೊಟ್ಟು ಪ್ರತಿ ಕಾರ್ಯದಲ್ಲಿ ಉತ್ಸಾಹಪೂರ್ವಕವಾಗಿ ಭಾಗವಹಿಸುವಂತೆ ಮಾಡಿದ ಸಂಘಕ್ಕೆ ನಾನು ಸದಾ ಚಿರರುಣಿ. ಅಧ್ಯಕ್ಷರಿಂದ ಹಿಡಿದು ಪ್ರತಿಯೋಬ್ಬರದ ಮಾತು ಹೇಗೂ ಮಾತಿನಲ್ಲಿರುವ ಮರ್ಯಾದಾ ಭಾವ ಅವರೆಲ್ಲರ ಸಂಸ್ಕೃತಿಯನ್ನು ಎತ್ತಿಹಿಡಿಯುವಂತಿದೆ. ಚಂದ್ರನನ್ನು ಕಾಯುವ ಚಕೋರದಂತೆ ಪ್ರತಿ ತಿಂಗಳೂ ವಿವಿಧ ಕಾರ್ಯಕ್ರಮಕ್ಕೆ ಕಾಯುವ ನಾನು,ವಿವಿಧ ಕ್ಷೇತ್ರಗಳ ವಿಷಯಗಳನ್ನು ತಿಳಿಯಲು ಕಾತುರದಿಂದಿರುತ್ತೆನೆ. ಕೇವಲ ಒಂದೇ ವರ್ಷದಲ್ಲಿ ನನ್ನನು ನಿಮ್ಮೆಲ್ಲರಲ್ಲಿ ಒಂದು ಮಾಡಿಕೊಂಡು ನನ್ನಲ್ಲಿ ಹೊಸ ಕಿಡಿಯನನ್ನು ಹಚ್ಚಿರುವುದಕ್ಕೆ ನನ್ನ ಕೋಟಿ ಕೋಟಿ ಧಾನ್ಯವಾದಗಳು. ಉಜ್ವಲ ಸೂರ್ಯನಂತೆ ನಮ್ಮ ಸಂಘ ಹೆಚ್ಚಿ ಹೊಲೆಯಲಿ ಹೀಗೆ ಇನ್ನೂ ಉತ್ತಂಗಕ್ಕೆ ಬೆಳೆಯಲಿ ಎಂದು ಮನಃಪೂರ್ವಕವಾಗಿ ಆಶಿಸುತ್ತೇನೆ.





Take a glimpse into the vibrant journey of Kannada Sangha through our gallery. From cultural programs, festivals, dramas, and traditional celebrations to community gatherings, each moment reflects our unity, heritage, and pride.
ನಮಸ್ಕಾರ ಸಿಂಗಪುರದ ಕನ್ನಡ ಬಂಧುಗಳೆ, ೨೦೨೫–೨೦೨೭ ಅವಧಿಗೆ ಕನ್ನಡ ಸಂಘ (ಸಿಂಗಪುರ)ದ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಅವಕಾಶ ನನಗೆ ದೊರೆತಿರುವುದು ಹೆಮ್ಮೆಯ ಹಾಗೂ ಗೌರವದ ವಿಷಯ. ೧೯೯೬ರಲ್ಲಿ ಸ್ಥಾಪಿತವಾದ ನಮ್ಮ ಸಂಘವು ಕನ್ನಡ ಸಂಸ್ಕೃತಿ, ಪರಂಪರೆ ಮತ್ತು ಏಕತೆಯ ಸಂಕೇತವಾಗಿದೆ ಹಾಗು ಈ ಮೌಲ್ಯಗಳ ಬೆಳವಣಿಗೆಗೆ ಇಂದಿಗೂ ಶ್ರದ್ಧೆಯಿಂದ ಶ್ರಮಿಸುತ್ತಿದೆ. ಕನ್ನಡ ಸಂಘದ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸುತ್ತಿರುವ ನಮ್ಮ ಹೆಮ್ಮೆಯ ಹಿರಿಯರಿಗೆ, ಸ್ವಯಂ ಸೇವಕರಿಗೆ ಹಾಗೂ ಪ್ರಾಯೋಜಕರಿಗೆ ತಮ್ಮ ಸಹಕಾರಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ಸಂಘದ ಮೂಲ ಉದ್ದೇಶವನ್ನು ಗುರಿಯಾಗಿಟ್ಟುಕೊಂಡು ಸಿಂಗನ್ನಡಿಗರಿಗೆ ಕನ್ನಡ ಭಾಷೆ, ಕಲೆ ಹಾಗೂ ಸಂಸ್ಕೃತಿಗಳನ್ನು ಎತ್ತಿ ಹಿಡಿಯುವ ಕಾರ್ಯಕ್ರಮ ಗಳನ್ನು ರೂಪಿಸಿ ಸಂಘದ ಪ್ರಗತಿ ಹಾಗೂ ಕನ್ನಡವನ್ನು ಬೆಳೆಸುವ ಪ್ರಯತ್ನ ನಮ್ಮದಾಗಿರುತ್ತದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ, ಪ್ರೀತಿ, ಮತ್ತು ಕನ್ನಡ ಭಾಷೆಯ ಮೇಲಿನ ಅಭಿಮಾನ ಅವಶ್ಯ. ಇಂದು ನಾವು ನಮ್ಮ ಪರಂಪರೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಅದನ್ನು ಹೊಸ ತಲೆಮಾರಿಗೆ ತಲುಪಿಸುವ ನವೀನ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ. ಬನ್ನಿ, ನಾವೆಲ್ಲ ಒಟ್ಟಾಗಿ ನಮ್ಮ ಕನ್ನಡ ಸಂಸ್ಕೃತಿಯ ಬೇರುಗಳನ್ನು ಪೋಷಿಸೋಣ, ನಮ್ಮ ಕನ್ನಡದ ಪರಂಪರೆಯನ್ನು ಕನ್ನಡದ ಚೈತನ್ಯವನ್ನು ಎತ್ತಿಹಿಡಿಯುವ ಕೈಂಕರ್ಯವನ್ನು ಮುಂದುವರಿಸೋಣ, ಹಾಗೂ ನಮ್ಮ ಸುಂದರ ಭಾಷೆ ಮತ್ತು ಸಂಪ್ರದಾಯಗಳನ್ನು ಭವಿಷ್ಯದ ಪೀಳಿಗೆಗೆ ರವಾನಿಸೋಣ, ನಮ್ಮ ಸಂಘವನ್ನು ಮತ್ತಷ್ಟು ಶಕ್ತಿಶಾಲಿಯಾಗಿಸಲು ನಮ್ಮ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ, ಸ್ವಯಂಸೇವೆಯ ಮೂಲಕ, ಅಥವಾ ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವ ಮೂಲಕ ಸಂಘದ ಅಭಿವೃದ್ಧಿಗೆ ಬೆಂಬಲಿಸಿ, ನಮ್ಮೊಂದಿಗೆ ಸಹಕರಿಸುವಂತೆ ಕೇಳಿಕೊಳ್ಳುತ್ತೇವೆ. ಮುಖ್ಯವಾಗಿ ಯುವ ಕನ್ನಡಿಗರೆ, ನಿಮ್ಮ ಕಲ್ಪನೆ, ಶಕ್ತಿ ಮತ್ತು ಧ್ವನಿಗೆ ನಿಮ್ಮದೇ ಆದ ಶೈಲಿಯಲ್ಲಿ ಕನ್ನಡವನ್ನು ಆಚರಿಸಲು, ಸಂಸ್ಕೃತಿಯನ್ನು ಹೊಸ ರೂಪದಲ್ಲಿ ಜೀವಂತವಾಗಿಡಲು ನಮ್ಮ ಸಂಘದಲ್ಲಿ ಸ್ಥಳವಿದೆ. ಅಲ್ಲಮ ಪ್ರಭು ಅವರ "ಅರಿವೇ ಪರಮಾತ್ಮ." ಎಂಬ ಮಾತಿನಂತೆ ನಾವು ಜ್ಞಾನವನ್ನು ಹಂಚಿಕೊಳ್ಳೋಣ, ಸಂಸ್ಕೃತಿಯನ್ನು ಆಚರಿಸೋಣ, ಮತ್ತು ಒಟ್ಟಾಗಿ ಬೆಳೆಯೋಣ. ಧನ್ಯವಾದಗಳು! ಆದರಪೂರ್ವಕವಾಗಿ, ವೆಂಕಟೇಶ ಗದ್ದೆಮನೆ ಅಧ್ಯಕ್ಷರು, ಕನ್ನಡ ಸಂಘ (ಸಿಂಗಪುರ)