Quick Links
Copyright © 2020 Singara. All rights reserved Designed By SMDS
ಕನ್ನಡ ನಾಡನ್ನು ತೊರೆದು ದೂರದ ದೇಶಕ್ಕೆ ಬಂದ ಕನ್ನಡಿಗರಿಗೆ, “ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ” ಎಂಭ ಅನಾಥ ಪ್ರಜ್ಞೆ ಕಾಡದ ಹಾಗೆ ಕನ್ನಡಿಗರಿಗೆ ಸಾಂಸ್ಕೃತಿಕ ನೆಲೆಯೊಂದನ್ನು ಕಟ್ಟಿ ಕೊಟ್ಟ ಕನ್ನಡ ಸಂಘ ಸಿಂಗಾಪುರಕ್ಕೆ ನಾವೆಲ್ಲರೂ ಆಭಾರಿ. ಮುಂದಿನ ಪೀಳಿಗೆಗೆ ಸಿರಿಗನ್ನಡದ ಸುಗಂಧದ ತರಂಗಗಳನ್ನು ತಲುಪಿಸುವ ‘ಕನ್ನಡ ಕಲಿ’ ಕಾರ್ಯಕ್ರಮಕ್ಕೆ ವಿಶೇಷ ಅಭಿನಂದನೆಗಳು. ಈ ಕಾರ್ಯಕ್ರಮವು ಕನ್ನಡ ನಾಡಲ್ಲೇ ನಡೆಯುತ್ತಿರುವ ಎಷ್ಟೋ ಯೋಜನೆಗಳಿಗೆ ಮಾದರಿಯಾಗಬಲ್ಲದು.
“ಎತ್ತಣ ಮಾಮರ, ಎತ್ತಣ ಕೋಗಿಲೆ , ಎತ್ತಣಿಂದೆತ್ತ ಸಂಬಂಧವಯ್ಯ?- ಎಂಬ ಶಿವಶರಣರ ನುಡಿಯ ಅರಿವು ಸಿಂಗಪುರದ ಕನ್ನಡಸಂಘದ ಅದ್ಭುತ ಕಾರ್ಯಕ್ರಮಗಳನ್ನು ಅವಲೋಕಿಸಿದಾಗ ಆಗುವುದು.
ನನಗೆ ಅದರ ಅನುಭವ, “ಸ್ತ್ರೀ ಎಂದರೆ ಅಷ್ಟೇ ಸಾಕೆ?” ಹಾಗೂ “ಮನೆಯಲ್ಲೇ ಕಲಿ ಕನ್ನಡಕಲಿ” ಮುಂತಾದ ಮಿನ್ಕಾಣ್ಕೆ( online) ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗ ಆಗಿದೆ.
ಇತ್ತೀಚಿನ “ಪುರಂಧರ ನಮನ” ಹಾಗೂ”ಕಂಸಾಳೆ ಜನಪದ ಕುಣಿತ”ವಂತೂ ಅತ್ಯದ್ಭುತ ವಾಗಿತ್ತು!
ಇದೇ ರೀತಿಯಲ್ಲಿ ಮುಂಬರುವ ದಿನಗಳಲ್ಲಿ ಸಿಂಗನ್ನಡಿಗರ ಕಾರ್ಯಕ್ರಮಗಳು ಇನ್ನೂಹೆಚ್ಚಾಗಿ ನಡೆಯಲಿ ಹಾಗೂ ನಮ್ಮ ಕನ್ನಡ ಕಹಳೆ ವಿಶ್ವದಾದ್ಯಂತ ಮೊಳಗಲಿ ಎಂದು ಆಶಿಸುತ್ತೇನೆ.
“ಜೈ ಕರ್ನಾಟಕ ಮಾತೆ”