• Login
  •    
  • Home
  • About Us
    • Introduction
    • Kannadigas in Singapore
    • Our Constitution
    • History Of Constitution
    • Our Emblem
    • President's Message
    • Contact Us
  • Committee
    • Current Committee
    • Past Committee
  • Members
    • Membership List
    • New/Renew Membership application
    • Student Membership Application
  • Events/Gallery
    • Videos
    • Photos
    • Upcoming Event
    • Past Event
    • Feedback
  • Publications & Awards
    • Singara Patrike
    • Sinchana Newsletter
    • Aajeeva Sadhana Puraskara
    • Singara Puraskara

President's Message


ಸಿಂಗಪುರದ ಕನ್ನಡ ಮನಗಳಿಗೆ,

ನಮ್ಮನ್ನು ಹರಸಿ, ಹಾರೈಸಿದ ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು. ೨೦೨೧-೨೩ರ ಕಾಲಾವಧಿಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷನಾಗಿ ನಮ್ಮ ಒಂದು ಸುಂದರ ತಂಡದೊಂದಿಗೆ ಮತ್ತೆ ಕನ್ನಡ ಸಂಘ (ಸಿಂಗಪುರ)ದ ಮಹೋನ್ನತ ಯಶಸ್ಸಿನಲ್ಲಿ ಭಾಗಿಯಾಗಿ ಸೇವೆ ಸಲ್ಲಿಸುವ ಒಂದು ಸುಯೋಗಕ್ಕೆ ಆಯ್ಕೆಯಾಗಿರುವುದು ಸಂತಸದ ವಿಷಯ. ೨೫ ವರ್ಷಗಳಿಂದ ಸಮಾನ ಮನಸ್ಸುಗಳು ಸೇರಿ ಕನ್ನಡದ ಪರಂಪರೆಯನ್ನು ಭಾಷೆ, ಕಲೆ ಹಾಗೂ ಸಂಸ್ಕೃತಿಗಳನ್ನು ಪಸರಿಸುವುದರ ಮೂಲಕ ಸಂಘದ ಏಳ್ಗೆಗೆ ಶ್ರಮಿಸಿದ್ದಾರೆ. ಈ ರಜತ ಮಹೋತ್ಸವದ ಸಂಭ್ರಮದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾರಣರಾದ ಇದುವರೆಗಿನ ಕಾರ್ಯಕಾರಿ ಸಮಿತಿಯ ಸದಸ್ಯರು, ಪ್ರಾಯೋಜಕರು, ಸ್ವಯಂ-ಸೇವಕರು ಹಾಗೂ ಅವರ ಕನ್ನಡದ ಸೇವೆಗೆ ಬೆಂಬಲವಾಗಿ ನಿಂತಿದ್ದ ಕುಟುಂಬದ ಸದಸ್ಯರೆಲ್ಲರಿಗೂ ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಕೇವಲ ಯುಗಾದಿಯ ನೆಪದಲ್ಲಿ ಸೇರುತ್ತಿದ್ದ ಹಲವು ಕುಟುಂಬಗಳ ಮಹದಾಸೆಯ ಕನಸು ಇಂದು ಬೃಹತ್ ಸಂಘವಾಗಿ ಬೆಳೆದು ತನ್ನ ಸಂಘಟನೆಯನ್ನು ವಿಸ್ತರಿಸುತ್ತಿರುವುದು ಸಿಂಗನ್ನಡಿಗರೆಲ್ಲರೂ ಹೆಮ್ಮೆ ಪಡುವಂತಹ ವಿಷಯ.ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಪರಿಚಯವಾಗಿ ಆತ್ಮೀಯ ಸ್ನೇಹಿತರಾಗಿರುವುದು ಬಹುತೇಕ ಕನ್ನಡ ಸಂಘದ ಮುಖಾಂತರ ಎನ್ನುವುದು ನನ್ನ ಬಲವಾದ ನಂಬಿಕೆ. ಈ ೨೫ ವರ್ಷಗಳಲ್ಲಿ, ಸಿಂಗಪುರದಲ್ಲಿ ನೆಲೆಸಿರುವ ಅನೇಕ ಕನ್ನಡಿಗರಿಗೆ ವೃತ್ತಿಯನ್ನು ಹೊರತು ಪಡಿಸಿ ನಮ್ಮದೇ ಆದ ಅಸ್ತಿತ್ವವನ್ನು ಸಾರುವಲ್ಲಿ ಸಂಘದ ಪಾತ್ರ ಅತಿ ಮುಖ್ಯ. ನಮ್ಮ ತಾಯ್ನಾಡಿನ ಭಾವುಕತೆಯ ಕೊಂಡಿಯನ್ನು ಕಾಪಾಡಿಕೊಂಡು ಬರುತ್ತಿರುವುದು ಕೂಡ ಸಂಘವೇ ಎನ್ನುವುದು ನನ್ನ ಬಲವಾದ ನಂಬಿಕೆ.

ಈ ನಿಟ್ಟಿನಲ್ಲಿ ಸಂಘವು ತನ್ನ ಚಲನಶೀಲತೆಯ ಗುಣದಿಂದ ರೂಪಾಂತರಗೊಳ್ಳುತ್ತಾ ಸದಸ್ಯರ ಅಭಿಲಾಷೆಗಳನ್ನು ಪೂರೈಸುತ್ತಾ ಬರುತ್ತಿದೆ.ನಾವು ನಮ್ಮ ಸಮಿತಿಯ ಸದಸ್ಯರೆಲ್ಲರೂ ಕೂಡಿ, ಸಿಂಗಪುರದಲ್ಲಿ ಕನ್ನಡ ಸಂಘ(ಸಿಂಗಪುರ)ದ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ನಮ್ಮ ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡುತ್ತೇವೆ ಎಂದು ಈ ಮೂಲಕ ತಿಳಿಸಲು ಆಶಿಸುತ್ತೇನೆ. ನಮ್ಮ ಶಕ್ತಿ, ನಮ್ಮ ಈ ಹಿಂದಿನ ಸದಸ್ಯರ ಅನುಭವ ಅದರೊಂದಿಗೆ ಯುವ ಸಮುದಾಯವನ್ನು ಸಂಘದ ಚಟುವಟಿಕೆಗಳ ಭಾಗವಾಗಿಸಿಕೊಂಡು ಮುಂದಿನ ಪೀಳಿಗೆಯ ಮಕ್ಕಳಿಗೂ ಕನ್ನಡದ ಕಂಪನ್ನು ಹರಡುವಂತೆ ಮಾಡುವಲ್ಲಿ ನಮ್ಮ ಶ್ರಮವಿರುತ್ತದೆ.

ಈಗ ನಾವು ಡಿಜಿಟಲ್ ಯುಗಕ್ಕೆ ಪಾದಾರ್ಪಣೆಯನ್ನು ಮಾಡಿದ್ದೇವೆ, ಹಿಂದಿನ ಸಮಿತಿಯು ಅದಕ್ಕಾಗಿ ಶ್ರಮವಹಿಸಿ ಅನುಕೂಲಕರವಾದ ವೇದಿಕೆಯನ್ನು ಸೃಷ್ಟಿಸಿ ನಮಗೆ ಒದಗಿಸಿದ್ದಾರೆ. ಕೋವಿಡ್‌ನ ಈ ವಿಷಮ ಸ್ಥಿತಿಯಿಂದ ಹೊರಬರಲು ಸಿಂಗಾಪುರವು ಅನೇಕ ಜಾಗರೂಕತೆಯ ಕ್ರಮಗಳ ನಿರ್ಧಾರಗಳಿಂದ ಪರಿಸ್ಥಿತಿಯನ್ನು ನಿರ್ವಹಿಸುತ್ತಿದ್ದಾರೆ. ಅದೇ ನಿಟ್ಟಿನಲ್ಲಿ ಸಂಘವೂ ಕೂಡ ಎಲ್ಲವನ್ನೂ ಪರಿಗಣಿಸಿ, ಸಂಘದ ಕಾರ್ಯಕ್ರಮಗಳನ್ನು ಆಯೋಜಿಸಲು ನಾವು ಅಣಿಗೊಳ್ಳುತ್ತಿದ್ದೇವೆ.

"ನಮ್ಮ ಧ್ಯೇಯ, ಕನ್ನಡ ಪರವಾದಂತಹ ದಿಟ್ಟ ಹೆಜ್ಜೆ" ಈ ನಮ್ಮ ಆಶಯದಲ್ಲಿ ಎಲ್ಲಾ ಸದಸ್ಯರ ಬೆಂಬಲ, ಸಹಕಾರ, ಸಲಹೆಗಳು ಅತೀ ಮುಖ್ಯ. ದಯವಿಟ್ಟು ನಿಮ್ಮ ಸಲಹೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ, ಹೊಸಬರನ್ನು ಸಂಘಕ್ಕೆ ಪರಿಚಯಿಸಿ, ಇದು ನಮ್ಮೆಲ್ಲರ ನೆಚ್ಚಿನ ಸಂಘ ಅದರ ಏಳಿಗೆಯಲ್ಲಿ ಎಲ್ಲರೂ ಪಾಲ್ಗೊಂಡು ಜೊತೆಯಾಗಿ ಸಂಭ್ರಮಿಸೋಣ.

ಬನ್ನಿ ಎಲ್ಲರೂ ಒಟ್ಟುಗೂಡಿ, ಸಂಘವೆಂಬ ಹೆಮ್ಮರದ ನೆರಳಲ್ಲಿ, ಸುಂದರ ನೆನಪುಗಳನ್ನು ಸೃಷ್ಟಿಸೋಣ.

ವಂದನೆಗಳೊಂದಿಗೆ,

ವೆಂಕಟ ರತ್ನಯ್ಯ
ಅಧ್ಯಕ್ಷರು
ಕನ್ನಡ ಸಂಘ (ಸಿಂಗಪುರ)


Contact Us
Be a Member/Renew
Subscribe to Sangha Emails

Social Links

Quick Links

  • About Us
  • Committee
  • Members
  • Events/Gallery
  • Publications & Awards

Copyright © 2020 Singara. All rights reserved Designed By SMDS