• Login
  •    
  • Home
  • About Us
    • Introduction
    • Kannadigas in Singapore
    • Our Constitution
    • History Of Constitution
    • Our Emblem
    • President's Message
    • Contact Us
  • Committee
    • Current Committee
    • Past Committee
  • Members
    • Membership List
    • New/Renew Membership application
    • Student Membership Application
  • Events/Gallery
    • Videos
    • Photos
    • Upcoming Event
    • Past Event
    • Feedback
  • Publications & Awards
    • Singara Patrike
    • Sinchana Newsletter
    • Aajeeva Sadhana Puraskara
    • Singara Puraskara

        

ಕನ್ನಡ ಸಂಘ (ಸಿಂಗಪುರ)ದ ಲಾಂಛನ “ಸಿಂಗಾರ” ಮತ್ತು ಅದರ ಮಹತ್ವ

ಕನ್ನಡ ಸಂಘ(ಸಿಂಗಪುರ)ದ ಲಾಂಛನ(“Logo”)ವು ನಮ್ಮ ಕರ್ನಾಟಕದ ಪ್ರಾಚೀನ ಮತ್ತು ವಿಶಿಷ್ಟ ಕಲೆಯಾದ ತೊಗಲು ಗೊಂಬೆಯಾಟದಲ್ಲಿ ಮತ್ತು ಬೆಳಕು-ನೆರಳಿನಾಟದಲ್ಲಿ ಬಳಸುವ ಗೊಂಬೆಯ ನಿದರ್ಶನ. ಈ ಗೊಂಬೆಗಳು ಚರ್ಮ(ತೊಗಲು)ದಿಂದ ಮಾಡಿದವು ಮತ್ತು ಗೊಂಬೆಯ ಮುಖಭಾವಗಳಿಗೆ ತರಕಾರಿಗಳಿಂದ ಹಿಂಡಿತೆಗೆದ ಬಣ್ಣದ ಬಳಕೆ ಇದೆ. ಈ ಗೊಂಬೆಯಾಟದಲ್ಲಿ ಬರುವ ಪಾತ್ರಗಳು ನಮ್ಮ ಭಾರತೀಯ ಮಹಾಗ್ರಂಥಗಳಾದ ರಾಮಾಯಣ, ಮಹಾಭಾರತದಿಂದಾಯ್ದವುಗಳು.

ಈ ಆಟದಲ್ಲಿ ಬರುವ ಸಂಭಾಷಣೆಗಳು ಬರೀ ಆಡುಮಾತಿನ ರೂಪದಲ್ಲಿ ಅಥವಾ ಹಾಡಿನ ರೂಪದಲ್ಲಿ ಅಥವಾ ಎರಡೂ ಕೂಡಿಕೊಂಡಿರುತ್ತವೆ. ಜೊತೆಗೆ ಹಾರ್ಮೋನಿಯಮ್ನಂತಹ ಸಂಗೀತ ಉಪಕರಣಗಳ ಹಿನ್ನೆಲೆ ಸಂಗೀತ ಕೂಡ ಇರುತ್ತದೆ. ರಾಮಾಯಣ, ಮಹಾಭಾರತದ ಕಥೆಗಳನ್ನು ಪ್ರಚಲಿತಗೊಳಿಸಲು ಮತ್ತು ಮಹಾಗ್ರಂಥಗಳಲ್ಲಿ ಬರುವ ವಿವಿಧ ಪಾತ್ರಗಳ ಸದ್ಗುಣಗಳನ್ನು ಎತ್ತಿಹಿಡಿಯುವ ನೀತಿಕಥೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಲು ಈ ಸಾಂಪ್ರದಾಯಿಕ ಗ್ರಾಮೀಣ ರಂಗಮಂಚವನ್ನು ಬಳಸಲಾಗುತ್ತಿತ್ತು. ತಾಂತ್ರಿಕತೆಯ ಪರಿಣಾಮವಾಗಿ ಬಂದ ದೂರದರ್ಶನ, ಸಿನೇಮಾದಂತಹ ಆಧುನಿಕ ಮಾಧ್ಯಮಗಳಿಂದಾಗಿ ತೊಗಲು ಗೊಂಬೆಯಾಟ ಈಗ ನಶಿಸಿಹೋಗುತ್ತಿದೆ.

ಕರ್ನಾಟಕದ ತೊಗಲು ಗೊಂಬೆಯಾಟಕ್ಕೆ ಬಹಳ ಸಾಮ್ಯತೆ ಹೊಂದಿರುವ ಕಲಾಪ್ರಾಕಾರವು ಇಂಡೋನೇಶಿಯಾದಲ್ಲಿಯೂ ಕ್ರಿಸ್ತಶಕ ಮೊದಲನೇ ಶತಮಾನದಿಂದ ಪ್ರಸಿದ್ಧವಾಗಿದ್ದು, ಈ ಬೆಳಕು-ನೆರಳಿನಾಟವು “ವಯಾಂಗ್ ಕುಲಿತ್” ಎಂಬ ಹೆಸರಿನಿಂದ ಪ್ರಚಲಿತವಾಗಿದೆ. ತೊಗಲು ಗೊಂಬೆಯಾಟವು ದಕ್ಷಿಣ ಭಾರತದಲ್ಲಿ, ಅದರಲ್ಲೂ ಮುಖ್ಯವಾಗಿ ಕರ್ನಾಟಕದಲ್ಲಿ ಮಾತ್ರ ಕಾಣಬರುವುದರಿಂದ ಈ ಸಾಂಪ್ರದಾಯಿಕ ಆಟವನ್ನು ದಕ್ಷಿಣ ಭಾರತೀಯ ಪ್ರವಾಸಿಗಳು ಮತ್ತು ವರ್ತಕರು ಇಂಡೋನೇಶಿಯಾದಲ್ಲಿ ಪರಿಚಯಿಸಿದರು ಎನ್ನಲಾಗಿದೆ. “ವಯಾಂಗ್ ಕುಲಿತ್”ನಲ್ಲಿ ಬಳಸುವ ಗೊಂಬೆಗಳೂ ರಾಮಾಯಣ, ಮಹಾಭಾರತದ ಪಾತ್ರಗಳನ್ನಾಧರಿಸಿದ್ದು. UNESCO ಸಂಸ್ಥೆಯು “ವಯಾಂಗ್ ಕುಲಿತ್” ಆಟವನ್ನು “Masterpiece of Oral and Intangible Heritage of Humanity” ಎಂದು ಗುರುತಿಸಿದ್ದು, ಈ ಶ್ರೀಮಂತ ಸಂಸ್ಕೃತಿಯನ್ನು ಸಂರಕ್ಷಿಸುವ ಆಶ್ವಾಸನೆಯನ್ನು ಪಡೆದುಕೊಂಡಿದೆ.

ಕನ್ನಡ ಸಂಘ(ಸಿಂಗಪುರ)ದ ಲಾಂಛನವು ಕರ್ನಾಟಕದ ಹಾಗೂ ದಕ್ಷಿಣ-ಪೂರ್ವ ಏಶಿಯಾದ ನಡುವಣ ಸಾಂಸ್ಕೃತಿಕ ಮಹತ್ವದ ಸಂಬಂಧದ ಸಾಂಕೇತಿಕ ಕೊಂಡಿ. ಒಂದು ರೀತಿಯಲ್ಲಿ ಈ ಸಂಬಂಧವನ್ನು ಎತ್ತಿಹಿಡಿಯುವಲ್ಲಿ ಕನ್ನಡ ಸಂಘ(ಸಿಂಗಪುರ)ವು ಮುಖ್ಯ ಭೂಮಿಕೆಯನ್ನು ವಹಿಸುತ್ತಿದೆ. ತನ್ನದೇ ಅಂತರ್ಜಾಲ ತಾಣವನ್ನು ಹೊಂದುವ ವಿಶ್ವದ ಕನ್ನಡ ಸಂಘಗಳಲ್ಲಿ ಸಿಂಗಪುರ ಕನ್ನಡ ಸಂಘವೇ ಮೊದಲನೆಯದು. ನಮ್ಮ ಅಂತರ್ಜಾಲ ತಾಣಕ್ಕೆ ನಾವು “ಸಿಂಗಾರ”ಎಂಬ ಹೆಸರನ್ನೇ ಆಯ್ಕೆ ಮಾಡಿದೆವು. “ಸಿಂಗಾರ” ಹೆಸರಿನಲ್ಲೇ ನಮ್ಮ ಸಂಘವು ಕನ್ನಡದ ಹೊತ್ತುಗೆಯನ್ನು ಕಾಲಕಾಲಕ್ಕೆ ಹೊರತರುತ್ತಿದೆ. ಕಳೆದ ಹಲವಾರು ವರ್ಷಗಳಿಂದ “ಸಿಂಗಾರ” ಎಂಬ ಪದವು ಕನ್ನಡ ಸಂಘ(ಸಿಂಗಪುರ)ಕ್ಕೆ ಸಮಾನಾರ್ಥಕವಾಗಿ ಬೆಳೆದಿದೆ. “ಸಿಂಗಾರ” ಪದದ ಅರ್ಥ ಅಲಂಕಾರ, ಶೃಂಗಾರ. ಈ ಲಾಂಛನವು ಶೃಂಗಾರ ಮಾಡಿಕೊಂಡ ಮಹಿಳೆಯ ಚಿತ್ರ ಹಾಗೂ ನಮ್ಮ ಸಂಘಕ್ಕೆ ಪೂರಕವಾದ ಲಾಂಛನ. ಸುಂದರವಾದ ಈ ಲಾಂಛನದ ಮೂಲಪ್ರತಿಯನ್ನು ಕೈಬರಹದಲ್ಲಿ ಬರೆದವರು ಕನ್ನಡನಾಡಿನ ಪ್ರಖ್ಯಾತ ಚಿತ್ರಕಾರ ಶ್ರೀ ಚಂದ್ರಕಾಂತ್ ಆಚಾರ್ಯ ಅವರು.

ಈ ಲಾಂಛನದ ಡಿಜಿಟಲ್ ಪ್ರತಿ ಇರದ ಕಾರಣ ಕನ್ನಡ ಸಂಘ (ಸಿಂಗಪುರ)ವು ೨೦೧೧ರಲ್ಲಿ ಇದೇ ಚಿತ್ರವನ್ನು ಇನ್ನೊಮ್ಮೆ, ಸಿಂಗನ್ನಡಿಗ ಕಲಾವಿದರಾದ ಶ್ರಿಮತಿ ರಶ್ಮಿ ಕೆ.ಸಿ ಅವರು ಮೂಲಕ ಬರೆಸಿತು. ಈ ರೇಖಾ ಚಿತ್ರವನ್ನು ಡಿಜಿಟಲ್ ಪ್ರತಿಗೆ ಹಸ್ತಾಂತರಿಸಿದ ಶ್ರೀ ರಾಜೇಶ್ ಹೆಗಡೆಯವರ ಕಾರ್ಯವೈಕರಿ ಸ್ಮರಿಣೀಯ.
೨೦೧೧ರ ವಾರ್ಷಿಕ ಮಹಾಸಭೆಯಲ್ಲಿ ನಮ್ಮ ಸಂಘದ ಸಂಸ್ಥಾಪಕ ಸದಸ್ಯರಾದ ಶ್ರೀ ಎ. ಎನ್. ರಾವ್ ಅವರು ಈ ಹೊಸ ಲಾಂಛನವನ್ನು ಪುನರ್-ಅನಾವರಣ ಮಾಡಿದರು. ಈ ಲಾಂಛನವು ಹಳೆಯ ಸೊಗಡುಗಳನ್ನುಳಿಸಿಕೊಂಡು ಹೊಸ ವರ್ಣಗಳನ್ನು ಪಡೆದುಕೊಂಡಿದೆ.

ಲೇಖನ:
ಪ್ರೊಫೆಸರ್ ಬಿ. ವೆಂಕಟೇಶ್ (ಸಿಂಗಪುರ)
ಕನ್ನಡಕ್ಕೆ ಅನುವಾದ: ಸುರೇಶ ಹೆಚ್. ಸಿ.(ಸಿಂಗಪುರ)
 

Significance of Kannada Sangha (Singapore) logo

This logo is an illustration of  a puppet  used in "Togalu Gombeyata", a type of shadow puppet show unique to the  state of  Karnataka. The puppets ("Gombe") are made of leather (Togalu) and the  facial  features are drawn with colorful dyes extracted from vegetables. The  characters  in the show are traditionally from Indian epics such as Mahabharata and  Ramayana. The dialogues are rendered either as spoken conversations or  as songs  or a combination of both, and accompanied by music with local  instruments such  as harmonium. This traditional rural theater, which was used very  effectively  to popularize stories from Mahabharata and Ramayana and to spread the  moral  values upheld by various characters in these epics, is now on the decline due  to a competition from modern forms of arts such as movies.

A shadow puppet show very  similar to Karnataka's  Togalu Gombeyata, and known as "Wayang Kulit", is popular in Indonesia.  It is  believed that this traditional art was introduced to Southeast Asia  sometime in  first century CE by traders from south India. The puppets in this show  are also  made of leather and the stories are based on characters in Mahabharata  and  Ramayana. UNESCO has designated Wayang Kulit as a "masterpiece of oral  and  intangible heritage of humanity" and obtained assurance from Indonesia  to  preserve this heritage. The logo of Kannada Sangha (Singapore) is thus  symbolic  of the traditional cultural link between Karnataka and Southeast Asia, which is  in a way being revived and continued by the Kannada Sangha (Singapore).

"Singara" is the name we chose  for the  website of Kannada Sangha, which was the first Kannada Sangha in the  world to  have its own website. Singara is also the title of the magazine that  Kannada Sangha  publishes periodically. Over the years, the word Singara has become  synonymous  with Kannada Sangha (Singapore). Singara literally means decoration or  adornment.  The illustration in the logo is also an exquisitely decorated face of a  woman  and hence an appropriate logo for Kannada Sangha (Singapore).  

This wonderful art was originally written by Shri. Chandrakanth Acharya. In 2010 the logo was re-written by Smt. Rashmi K.C and converted to Digital format by Shri. Rajesh Hegde.

During 2011 AGM, the new logo was officially re-launched by
Founder , Ex-President of Kannada Sangha (Singapore)
Prof. A.N.Rao
Prof. B. Venkatesh
14 June 2011



Contact Us
Be a Member/Renew
Subscribe to Sangha Emails

Social Links

Quick Links

  • About Us
  • Committee
  • Members
  • Events/Gallery
  • Publications & Awards

Copyright © 2020 Singara. All rights reserved Designed By SMDS