ಈ ಬದಿಯಲಿ Kallangನ Cage 3 ಮೈದಾನದಲ್ಲಿ "ನಾವು ಯಾರಿಗೂ ಕಮ್ಮಿ ಇಲ್ಲ .. ನಮ್ಮ ತಂಡ ಅಂದ್ರೆ ಸುಮ್ನೆ ಅಲ್ಲ" ಅಂತ 3 ಮಹಿಳಾ ತಂಡಗಳು ಲೀಗ್ ಪಂದ್ಯಗಳನ್ನು ಆಡಿದವು, Best of 3 ಆಧಾರಿತ ತುಲನೆಯ ನಂತರ “ಶರಾವತಿ” ತಂಡವು ಅತಿಹೆಚ್ಚು ಅಂಕಗಳನ್ನುಗಳಿಸಿ ವಿಜಯಶಾಲಿಯಾಗಿ ಹೊರಹೊಮ್ಮಿತು. ಜನಸಾಮಾನ್ಯರ ಬದುಕನ್ನು ಉನ್ನತಗೊಳಿಸಲು ಹನ್ನೆರಡನೆಯ ಶತಮಾನದ ಶಿವಶರಣರು ಶ್ರಮಿಸಿರುವುದು ನಮಗೆಲ್ಲಾ ತಿಳಿದೇ ಇದೆ. ಶರಣರು ಸಾಹಿತ್ಯ ರಚಿಸಬೇಕೆಂಬ ಉದ್ದೇಶದಿಂದ ವಚನಗಳನ್ನು ಬರೆಯದೆ ದಿನನಿತ್ಯದ ತಮ್ಮ ಅನುಭವಗಳನ್ನು ವಚನದ ರೂಪದಲ್ಲಿ ಹೇಳಿದ್ದರಿಂದ ವಚನ ಸಾಹಿತ್ಯ ಒಂದು ಚಳಿವಳಿಯಾಯಿತು ಎಂಬುದು ಇತಿಹಾಸ. ವರ್ಣ-ಆಧಾರಿತ, ಜಾತಿ ಆಧಾರಿತ, ಲಿಂಗ-ಆಧಾರಿತ ಅಸಮಾನತೆಯನ್ನು ನಿರ್ಮೂಲಗೊಳಿಸಿ ಸರ್ವ ಸಮಾನತೆಯ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದವರು ಶಿವ ಶರಣರು. ಈ ಹಿನ್ನಲೆಯಲ್ಲಿ ಶ್ರೀ ಹಾನಗಲ್ ಕುಮಾರಸ್ವಾಮಿಯವರು ಎಲ್ಲರನ್ನು ಒಳಗೊಳ್ಳುವ ಮತ್ತು ಬಹುತ್ವ ಪರಂಪರೆಗೆ ಒತ್ತುಕೊಟ್ಟು ಸಮಸಮಾಜ ನಿರ್ಮಿಸಲು ಸ್ವಾತಂತ್ರ್ಯಪೂರ್ವದಲ್ಲಿ ಶ್ರಮಿಸಿದವರು. ಅಂತಹವರ ಜೀವನಾಧಾರಿತ 'ವಿರಾಟಪುರ ವಿರಾಗಿ' ಸಿನಿಮಾ ಶರಣರ ವಚನಗಳ ಅರ್ಥ ಮತ್ತು ಅಂತರಂಗದ ಅರಿವನ್ನು ಮೂಡಿಸಿದೆ. ವಚನಗಳನ್ನು ಸನ್ನಿವೇಶಗಳಿಗೆ ಹೊಂದುವಂತೆ ಆಯ್ಕೆ ಮಾಡಿಕೊಂಡು, ಅದಕ್ಕೆ ಅತ್ಯುತ್ತಮ ಸಂಗೀತ ಸಂಯೋಜನೆ ಮಾಡಿರುವುದು ಪ್ರೇಕ್ಷಕರ ಹೃದಯವನ್ನು ಗೆಲ್ಲುವಲ್ಲಿ ಸಹಾಯವಾಗಿದೆ. ಇಡೀ ತಂಡವು ಸ್ವಾತಂತ್ರ್ಯಪೂರ್ವ ಕಾಲಘಟ್ಟಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ. ತುಂಬಿದ ಸಭಾಂಗಣದಲ್ಲಿ 'ವಿರಾಟಪುರ ವಿರಾಗಿ' ಚಲನಚಿತ್ರ ಪ್ರದರ್ಶನ, ವಚನ ಸಾಹಿತ್ಯದ ಬಗೆಗಿನ ವಿಚಾರ ಗೋಷ್ಠಿ, ವಚನ ಸ್ಪರ್ಧೆಗಳಲ್ಲಿನ ವಿಜೇತರಿಗೆ ಬಹುಮಾನ ವಿತರಣೆ ಕೊನೆಯಲ್ಲಿ ದಾಸೋಹದೊಂದಿಗೆ ಅನೇಕ ವಿಚಾರಗಳ ವಿವರಣೆ, ವಿಮರ್ಶೆ, ವಿತರಣೆಯಲ್ಲಿ ತನ್ನ ಸಾರ್ಥಕತೆಯನ್ನು ಕಂಡಿದೆ ಎಂದು ಕನ್ನಡ ಸಂಘ, ಸಿಂಗಾಪುರದ ಅಧ್ಯಕ್ಷರು ವೆಂಕಟ ರತ್ನಯ್ಯ ತಿಳಿಸಿದ್ದಾರೆ.