Strong Heart - Cardiovascular Health and Disease Prevention ಎನ್ನುವ ವಿಷಯದ ಮೇಲೆ ಮಾತನಾಡಲು ಬಂದಿದ್ದ ಆಹ್ವಾನಿತ ವೈದ್ಯರುಗಳಾದ Dr. Fam Jiang Ming (Clinical Assistant Professor) & Dr. Naik Madhava Janardhan (Associate Professor) ಗಳು ಕ್ರಮವಾಗಿ "Hypertension and Heart disease: the Silent Assassin" ಮತ್ತು “What You Should Know about Coronary Surgery?” ಗಳ ಬಗ್ಗೆ ಅನೇಕ ಉಪಯುಕ್ತವಾದ ಮಾಹಿತಿಗಳನ್ನು ಹಂಚಿಕೊಂಡರು. ಹೃದಯದ ಆರೋಗ್ಯದ ಬಗೆಗಿನ ಕಾಳಜಿ, ಜೀವನ ಕ್ರಮ, ವ್ಯಾಯಾಮ, ಅನುವಂಶೀಯವಾಗಿ ಹೃದಯದ ಆರೋಗ್ಯಕ್ಕೆ ಬರಬಹುದಾದ ಗುಣಗಳು ಹಾಗು ವೈದ್ಯಕೀಯ ಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಮಂಡಿಸಿದರು. ಇದೇ ಸಂದರ್ಭದಲ್ಲಿ Heart attack, Cardiac arrest, heartburn, muscle cramps ಮತ್ತು silent heart attack ಗಳ ಕುರಿತಾದ ಅನೇಕ ಅಂಶಗಳನ್ನು ಚರ್ಚಿಸಲಾಯಿತು. ಸುಮಾರು ೪೫ ನಿಮಿಷಗಳ ಕಾಲ ನಡೆದ ಪ್ರಶ್ನೋತ್ತರ ವೇಳೆಯಲ್ಲಿ ಇನ್ನೂ ಹೆಚ್ಚಿನ ವಿಷಯಗಳು ಪರಸ್ಪರ ವಿನಿಮಯಗೊಂಡವು.