ಕನ್ನಡ ಸಂಘ (ಸಿಂಗಪುರ)ವು ಆಯೋಜಿಸಿದ್ದ "ಪೃಕೃತಿ ಚಿಕಿತ್ಸೆ" ವಿಷಯದ ಕಾರ್ಯಕ್ರಮವು ದಿನಾಂಕ ರಂದು ಡಾ| ವೆಂಕಟರಮಣ ಹೆಗಡೆಯವರ ಜ್ಞಾನಧಾರೆಯಿಂದ ಸುಸಂಪನ್ನವಾಯಿತು. ಎಸ್. ಪಿ. ಜೈನ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟಿನ ಸಭಾoಗಣದಲ್ಲಿ ನಡೆದ ಆರೋಗ್ಯ ಸೂತ್ರಗಳು, ಆರೋಗ್ಯ ಹಾಗೂ ಹಾಸ್ಯ ಪೃಕೃತಿ ಚಿಕಿತ್ಸೆಯ ಡೆಮೋ ಮತ್ತು ಪ್ರಶ್ನೋತ್ತರ ಕಾರ್ಯಕ್ರಮವು "ಪ್ರವೇಶ ಉಚಿತ ಆರೋಗ್ಯ ಖಚಿತ" ಎಂಬ ಉಪ ಶೀರ್ಷಿಕೆಯಂತೆ ಸಾರ್ಥಕ್ಯದ ಅನುಭೂತಿ ನೀಡಿ ಜಿಜ್ಞಾಸುಗಳಾದ ಶ್ರೋತೃಗಳನ್ನು ನಗೆಹೊನಲಿನಲಿ ಮಿಂದೆದ್ದಿಸಿತು.