ಸಿಂಗಾರ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ - ೨೦೧೯ ಅತ್ಯುತ್ಸಾಹದಿಂದ ದಿನಾಂಕ ಮತ್ತು ೨೦೧೯ ರಂದು ಅರೇನಾ ಕಂಟ್ರಿ ಕ್ಲಬ್ ನಲ್ಲಿ ನಡೆಯಿತು. ಈ ವರ್ಷದ ಬ್ಯಾಡ್ಮಿಂಟನ್ ಪ್ರೀಮಿಯಂ ಲೀಗ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಹೆಚ್ಚಿನ ತಂಡಗಳನ್ನು ವ್ಯವಸ್ಥೆ ಮಾಡಲಾಗಿತ್ತು ಮತ್ತು ಆ ತಂಡಗಳನ್ನು IPL ತರಹ ಆಕ್ಷನ್ (auction) ಮೂಲಕ ಆಟಗಾರರನ್ನು ತಂಡದ ನಾಯಕರೇ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದ್ದು ತಂಡಗಳ ನಡುವೆ ಹೆಚ್ಚು ಬಿರುಸಿನ ಪಂದ್ಯಗಳು ನಡೆಯುವಂತೆ ಪ್ರೋತ್ಸಾಹಿಸಲಾಯಿತು. ಈ ಬ್ಯಾಡ್ಮಿಂಟನ್ ಲೀಗ್ ಜವಾಬ್ದಾರಿ ವಹಿಸಿಕೊಂಡಿದ್ದ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ರಮೇಶ ನಾರಾಯಣಪ್ಪ ಮತ್ತು ಸುಮಂತ್ ಜಯತೀರ್ಥ ಅವರು ಬಹಳ ಸುಗಮವಾಗಿ ಯೋಜನೆ ಮಾಡಿ ನಡೆಸಿಕೊಟ್ಟಿದ್ದರು.
ಸಿಂಗಪುರ್ ಪ್ಯಾರಾಒಲಿಂಪಿಕ್ಸ್ ನಲ್ಲಿ ಚಾಂಪಿಯನ್ ಆಗಿದ್ದ Mr ಕೆಲ್ವಿನ್ ಪಾಂಗ್ ಅವರು ಗೌರವ ಅತಿಥಿಯಾಗಿ ಆಗಮಿಸಿ ವಿಜೇತರಿಗೆ ಪದಕಗಳನ್ನು ವಿತರಿಸಿದರು.